Index   ವಚನ - 244    Search  
 
ಬಳಿಕ, ಈ ಮಂತ್ರದಿಂದ ಶಿವಲಿಂಗ ಪೂಜೆಯಂ ಮಾಡುವುದೆಂದು ಪೇಳುವೆನೆಂತೆನೆ: ಯಮ ನಿಯಮಂಗಳಲ್ಲಿ ಸಂಪನ್ನನಾಗಿ ಪವಿತ್ರವಾದ ಕರುಣವುಳ್ಳ ಶಿವಸ್ವರೂಪನಾದತ ಈ ಪಂಚಾಕ್ಷರ ಮಂತ್ರದಿಂದ ಶಿವಲಿಂಗವನು ಆವಾಗವು ಕರಪೀಠದಲ್ಲಿ ಅರ್ಚಿಸುವುದಯ್ಯ ಶಾಂತವೀರೇಶ್ವರಾ