Index   ವಚನ - 249    Search  
 
ಪೂರ್ವದಲ್ಲಿ ಉಪಮನ್ಯ ಮುನೀಶ್ವರನು ಪಿಶಾಚಿಗಳಿಂದ ಹಿಂಸೆಗೆ ಒಳಗಾಗಿಯೂ ಬ್ರಹ್ಮ ಪ್ರಕಾಶವುಳ್ಳವನಾಗಿ ಶಿವಸ್ಮರಣೆಯನು ಮಾಡಿ ಚಲಿಸದೆ ಇದ್ದನು. ಆ ಮೇಲೆ ಗಂಭೀರವಾದ ಧ್ವನಿಯಿಂದ ‘ನಮಃ ಶಿವಾಯ’ ಎಂದು ನುಡಿದನು; ಹಿಂದೆ ಹಿಂಸಿಸಿದ ಪಿಶಾಚಿಗಳು ಉಪಮನ್ಯು ಮಹಾಮುನೀಶ್ವರರು ಕಾರಣವಾಗಿ ಪಂಚಾಕ್ಷರಿ ಮಂತ್ರವನ್ನು ಕೇಳಿ ಆ ಕ್ಷಣವೆ ಪಿಶಾಚ ದೇಹವನು ಬಿಟ್ಟು ಮನುಷ್ಯ ದೇಹವಂ ತಾಳಿ ಶಿರಸ್ಸಿನಿಂದ ಮಹಾತೇಜಃಪ್ರಭಾವವುಳ್ಳ ಉಪಮನ್ಯು ಮುನೀಶ್ವರರ ಸಮೀಪಿಸಿ ‘ಎಲೆ ಮಹಾಮುನಿಯೆ ನಮ್ಮನು ರಕ್ಷಿಸು’ ಎಂದು ನುಡಿದ ನಮಸ್ಕಾರವ ಮಾಡಿದರಯ್ಯ ಶಾಂತವೀರೇಶ್ವರಾ