Index   ವಚನ - 251    Search  
 
ತರುವಾಯ, ಲಕ್ಷಣವ ಅರಿಯಬೇಕಾದುದು ಮನವೆಂದು, ನೆನಹಿನ ಲಕ್ಷಣವೆ ಕುರುಹು ದೃಕ್ಕೆಂದು ನೋಡುವದೆ ಕುರುಹು ಅಹುದು ನುಡಿಯುವದೆ ವಾಕ್ಕು, ಕಟವಾಯಿ ನಾಲಗೆಗಳ ಕೂಟವು ವರ್ಣಂಗಳ ಲಕ್ಷಣವು; ಆ ಲಕ್ಷಣವೆ ಶರೀರವೆಂದು ಹೇಳಲಾಗುವುದು. ಮನಸ್ಸಂಬಂಧವಾದ ಅರ್ಥವು ದೃಕ್ಸಂಬಂಧವಾದ ವರ್ಣವು ನುಡಿ ಸಂಬಂಧಬಾದ ಪದವು ಶರೀರ ಸಂಬಂಧವಾದ ವಾಕ್ಕು ಪರಿವಿಡಿಯಿಂದ ‘ಪರೆ’ಯೆಂದು ‘ಪಶ್ಯಂತಿ’ ಎಂದು ‘ಮಧ್ಯಮೆ’ ಎಂದು ‘ವೈಖರಿ’ ಎಂದು ಈ ಪ್ರಕಾರದಲ್ಲಿ ಹೇಳುವರಯ್ಯ ಶಾಂತವೀರೇಶ್ವರಾ