Index   ವಚನ - 265    Search  
 
ಪುರಶ್ಚರಣಮಂ ಮಾಡಿ ಬಿಡುವುದೆ ಪುರಶ್ವರಣ ಜಪವದು ಮಧ್ಯಮವೆನಿಸುವುದಯ್ಯ, ಪುರಶ್ಚರಣಂಗೈದು ಮೇಲೆ ಸಂಖ್ಯಾ ನಿಯಮದಿಂದ ಪ್ರಾಣಾಂತಮಾಗಿ ಮಾಳ್ಪುದೆ ಪುರಶ್ಚರಣಪೂರ್ವಕ ನಿತ್ಯಜಪವದುತ್ತಮವೆನಿಸುವುದೆಂದು ವಿಭಾಗಿಸಿ ಮೇಲೆ ಮಂತ್ರ ಜಪ ಪ್ರಾರಂಭದಲ್ಲಿ ಪ್ರಾಣಾಯಾಮತ್ರಯಂ ಮಾಡಿ ಬಳಿಕಾ ಮಂತ್ರಕ್ಕೆ ವಾಮದೇವನೆ ಋಷಿ, ಪಙ್ತೆ ಛಂದಃ ಸದಾಶಿವನಧಿದೇವತೆ, ಪ್ರಣವವೆ ಬೀಜ, ಉಮಾ ಶಕ್ತಿ, ಉದಾತ್ತ ಸ್ವರ, ಶ್ವೇತ ವರ್ಣ, ಭೋಗಮೋಕ್ಷಾರ್ಥಮಾದ ಜಪವೆ ನಿಯಮಯೋಗವೆಂದು ಮೊದಲು ಸ್ಮರಿಸಿ, ಬಳಿಕ ಪಿಂಡ ಬ್ರಹ್ಮಾಂಡಗಳಲ್ಲಿ ಭೂಮ್ಯಾದ್ಯಾತ್ಮಾಂತಮಾದಾರನು ಕ್ರಮದಿಂ ನಕಾರದಿ ಪ್ರಣವಾಂತಮಾದಕ್ಷರಾತ್ಮಕಮೆಂದನುಸಂಧಾನಿಸಿ, ಮತ್ತಮಾ ಮಂತ್ರದಿ ಕರಂ ನ್ಯಾಸಂಗೈವಲ್ಲಿ ಕರದ್ವಯದಂಗುಷ್ಠಾದಿ ಕನಿಷ್ಠಂತಮಾಗಿ ಯ ಕಾರಾದಿ ನ ಕಾರಾಂತಮಾದ ಪ್ರತ್ಯೇಕ ಬಿಂದು ಸಮೇತಮಪ್ಪ ಮಂತ್ರ ಬೀಜಂಗಳೊಂದೊಂದಕ್ಕೆ ಬಿಂದು ಸವೇಳುತಮಪ್ಪ ಪ್ರಣವದ್ವಯಮನಾದ್ಯಂತದಲ್ಲಿ ಕೂಡಿ ಅರಂಗುಲಂಗಳಾದಿಯಿಂದಗ್ರಪರ್ಯಂತರಂ ಮಾಳ್ಪುದೆ ‘ಸೃಷ್ಠಿನ್ಯಾಸ’ವೆನಿಸುವುದಯ್ಯ ಶಾಂತವೀರೇಶ್ವರಾ