ಬಳಿಕ ಶಕುನಿ ಮೊದಲಾದ ಭದ್ರೆ ಕಡೆಯಾದ
ಹನ್ನೊಂದು ಕರಣಂಗಳೊಳಗೆ
ಶಕುನಿ ಚತುಷ್ಕ ನಾಗ ವಸ್ತುಘ್ನ ವಣಿಜೆ ಭದ್ರೆ
ಎಂಬ ಆರು ಕರಣಂಗಳೆ ಅಶುಭಂಗಳು.
ಉಳಿದಯ್ದು ಕರಣಂಗಳೆ ಶುಭಂಗಳು.
ಕರಣಂಗಳ ಪರೀಕ್ಷಿಸಿದ ಬಳಿಕ
ಶುಭ ಇಥಿಯಂ ಶ್ರೀಯು ಬಳಿಕ
ಶುಭ ತಿಥಿಯಂ ಶ್ರೀಯು ಶುಭ ವಾರದಿಂದಾಯ್ದು
ಶುಭ ನಕ್ಷತ್ರದಿಂ ಪಾಪಕ್ಷಯ ಶುಭಯೋಗದಿಂ ರೋಗ ನಿವೃತ್ತಿ
ಶುಭಕರಣದಿಂ ಕಾರ್ಯ ಸಿದ್ಧಿಗಳಪ್ಪವಾಗಿ
ಮಂತ್ರ ಜಪ ಪ್ರಾರಂಭದಲ್ಲಿ ಎಲ್ಲಮಂ ಸರ್ವಥಾ
ವಿಚಾರಿಸ ಬೇಕಂಬುದನಂಗೀಕರಿಸಿ ಜಪ ಮಾಡುವುದಯ್ಯ
ಶಾಂತವೀರೇಶ್ವರಾ