Index   ವಚನ - 280    Search  
 
ಬಳಿಕ, ವಾಹನ ಮಂಚ ತಲೆಸುತ್ತು ಕುಪ್ಪಸ ದಿಗಂಬರ ಮುಕ್ತಕೇಶ ಅಶುಚಿತ್ವ ಬಹುಭಾಷೆ ಆಗುಳಿಕೆ ಸೀನು ತೂಕಡಿಕೆ ನಿಷ್ಠಿವನ ನೀಚಪ್ರಾಣಿ ದರ್ಶನ ವ್ಯಾಕುಲತೆಗಳುಳ್ಳಾತನಾಗಿ ಜಪಿಸಲಾದೆಂದು ನಿರ್ವಿಕಾರತ್ವದಿಂ ಕಾಷ್ಠಮೌನಿಯಾಗಿ ‘ಸಮಗ್ರೀವ ಶಿವ ಶರೀರ’ಯಾಗಿ ಮನೋ ದೃಷ್ಠಿಗಳೇಕಾಗ್ರತೆಯಿಂ ಧ್ಯಾನ ಮುದ್ರಾ ಸಮನ್ವಿತನಾಗಿ ಕುಳ್ಳಿರ್ದ ಬಳಿಕ ಭಸ್ಮ ರುದ್ರಾಕ್ಷಾಭರಣಮಂ ಗುರುಪಾದ ಸ್ಮರಣ ಪೂರ್ವಕಮಾಗಿ ಜಪಿಸುವದಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂ ವಿಭೂತಿ ರುದ್ರಾಕ್ಷೆಗಳ ಧರಿಸಿ ಪಂಚಾಕ್ಷರ ಮಂತ್ರವನು ಜಪಿಸಿ ಅವಾಗಳು ಲಿಂಗಾರ್ಚನೆಯಲ್ಲಿ ಆಸಕ್ತನಾದಾತನ ಸಾಂಗವಾದ ಕ್ರಿಯಾ ಚರಿತ್ರವು ಎಂತಿದ್ದಿತ್ತೆಂದೊಡೆ ಮುಂದೆ ‘ಭಕ್ತಸ್ಥಲ’ ಅಯಿತು.