Index   ವಚನ - 287    Search  
 
ಆಚಾರ್ಯರಲ್ಲಿಯೂ ಆಗಮ ವ್ಯಾಕ್ಯಂಗಳಲ್ಲಿಯೂ ವಿಶ್ವಾಸಿಯಾಗಿ ಲಿಂಗದಲ್ಲಿಯೂ ಜಂಗಮದಲ್ಲಿಯೂ ಭಕ್ತಿ ಉಳ್ಳಾತನಾಗಿ ಫಲಪದವನು ಬಯಸದೆ ಭಕ್ತಿ ಮಾಡುವಾತನು ‘ಭಕ್ತ’ನೆಂದು ಹೇಳುವರಯ್ಯ ಶಾಂತವೀರೇಶ್ವರಾ ಸೂತ್ರ:ಈ ಪ್ರಕಾರದಿಂದ ಸದ್ಭಕ್ತಿಸ್ಥಲ ಸಂಪತ್ತಿಯುಳ್ಳ ಭಕ್ತಂಗೆ ದೇಹ ಪ್ರಾಣ ರೂಪವಾದ ಕರ್ತೃ ಭೃತ್ಯರುಗಳ ಸಂಬಂಧವು ಎಂತೆಂದೊಡೆ ಮುಂದೆ ‘ಉಭಯಸ್ಥಲ’ವೆಂದು ಹೇಳಲಾಗಿದೆ.