Index   ವಚನ - 288    Search  
 
ಸೋಹ ದಾಸೋಹವೆಂದು ಎರಡು ಭೇದವಾಯುತ್ತು. ಎರಡಕ್ಕೂ ಭೇದವಿಲ್ಲ. ಅದೆಂತೆಂದೊಡೆ, ಬಿಂಬ ಪ್ರತಿಬಿಂಬದೋಪಾದಿ; ಬಿಂಬವೆಂತೆಂದೊಡೆ ದೇಹ, ಪ್ರತಿಬಿಂಬವೆಂತೆಂದೊಡೆ ನೆಳಲು. ದೇಹಕ್ಕೂ ನೆಳಲಿಗೂ ಭೇದವಿಲ್ಲದ ಹ್ಯಾಂಗೆ ಭಕ್ತಂಗೂ ಜಂಗಮಕ್ಕೂ ಭೇದವಿಲ್ಲವಯ್ಯ ಶಾಂತವೀರೇಶ್ವರಾ