Index   ವಚನ - 291    Search  
 
ಪರಾತ್ಪರವಾದ ಲಿಂಗದಲ್ಲಿಯೂ ಆ ಲಿಂಗದ ಸ್ವರೂಪವಾದ ಗುರುವಿನಲ್ಲಿಯೂ ಆವಾತಂಗೆ ಭಕ್ತಿಯ ಸಮಾನವಾಗಿಪ್ಪುದೋ ಆತನುಭಯಸ್ಥಲವುಳ್ಳಾನತಹನಯ್ಯ ಶಿವಜ್ಞಾನ ಮಹಾ ನಿಧಿಯಾಗಿರ್ದು ರಾಗ ದ್ವೇಷ ರಹಿತನಾದ ಗುರುವಿಗೆ ಶರೀರದಿಂದ ದ್ರವ್ಯದಿಂದ ಆವಾಗಲು ಭಕ್ತಿ ಮಾಡುವದಯ್ಯ! ಶಾಂತವೀರೇಶ್ವರಾ ಸೂತ್ರ : ಈ ಪ್ರಕಾರದಿಂದ ಉಭುಯಸ್ಥಲದಲ್ಲಿ ಲಿಂಗಾಂಗಗಳುಭಯ ಸ್ಥಲದ ಸಂಬಂಧದ ಜ್ಞಾನವು ಭಕ್ತಂಗೆ ಶರೀರ ಮನೋಭಾವಂಗಳಲ್ಲಿ ಗುರುಲಿಂಗ ಸ್ವರೂಪವಾದ ‘ತ್ರಿವಿಧಸಂಪತ್ತಿಸ್ಥಲ’ವಾಯಿತ್ತು.