Index   ವಚನ - 300    Search  
 
ತತ್ತ್ವ ಮನ ಪ್ರಾಣಂಗಳ ಗುರುಚರಣಕ್ಕೆ ಸಮರ್ಪಿಸುವುದೆ ‘ಗುರುಭಕ್ತಿ’ಯಯ್ಯ ಜಡೆ ಮುಡಿ ಲೋಚು ಬೋಳು ದಿಗಂಬರ ಮೊದಲಾದ ಶಿವಲಾಂಛನಧಾರಿಯಾದ ಜಂಗಮಕ್ಕೆ ಅನ್ನಾಚ್ಛಾದನಾಲಂಕಾರಾದಿಗಳಿಂದ ತೃಪ್ತಿಬಡಿಸಿ ಅವರ ಪ್ರಸಾದವ ಸೇವಿಸಲಾಗಿ ‘ಜಂಗಮಭಕ್ತಿ’ಯಯ್ಯ ಶಿವಲಿಂಗ ಭೋಜ್ಯ ಪಾನೀಯ ಭಕ್ಷ ಚೋಹ್ಯ ಲೇಹ್ಯ ಪದಾರ್ಥವನು ಸಮರ್ಪಿಸಿ ಆ ಪ್ರಸಾದವನು ಭೋಗಿಸುವುದೆ ‘ಪ್ರಸಾದ ಭಕ್ತಿ’ ಯಯ್ಯ ಶಾಂತವೀರೇಶ್ವರಾ