ನದಿಗಳು ಉದಕವನು ತಾವೆ ಕುಡಿಯವು
ವೃಕ್ಷಂಗಳು ಮಾಧುರ್ಯ ಫಲಂಗಳನು ತಾವೆ ಭಕ್ಷಿಸವು.
ದೇವೆಂದ್ರನು ಒಂದಾನೊಂದು ಠಾವಿನಲ್ಲಿ ಬೆಳೆದ ಬೆಳೆಗಳನು
ತಾನೆ ಭುಂಜಿಸನು ಅದು ಕಾರಣವಾಗಿ
ಸಜ್ಜನ ಸದ್ಭಕ್ತರ ಐಶ್ವರ್ಯವು
ಪರೋಪಕಾರಕ್ಕೋಸ್ಕರವಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Nadigaḷu udakavanu tāve kuḍiyavu
vr̥kṣaṅgaḷu mādhurya phalaṅgaḷanu tāve bhakṣisavu.
Dēvendranu ondānondu ṭhāvinalli beḷeda beḷegaḷanu
tāne bhun̄jisanu adu kāraṇavāgi
sajjana sadbhaktara aiśvaryavu
parōpakārakkōskaravayya śāntavīrēśvarā