‘ಎಲೆ ಪಾರ್ವತಿಯೆ, ತಪಸ್ಸು ಯಜ್ಞ ಮೊದಲಾದಂತಹ
ಕ್ರಿಯೆಗಳ ಪುಣ್ಯಂಗಳ ಸ್ವರ್ಗಾದಿ ಭೋಗಂಗಳು
ಅನುಭವಿಸಿ ತೀರಿದ ಮೇಲೆ ನಾಶವಾಗುವವು.
ಶಿವಭಕ್ತನ ಮುಖವೆಂಬ ಹೋಮ ಕುಂಡದಲ್ಲಿ ಮಾಡಿದಂಥ
ಅನ್ನೋದಕ ಮೊದಲಾದ ಹವಿಸ್ಸು ಎಂದೆಂದು ಕೆಡದು’
ಎಂದು ಈಶ್ವರನು ನಿರೂಪಿಸಿರುವನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘Ele pārvatiye, tapas'su yajña modalādantaha
kriyegaḷa puṇyaṅgaḷa svargādi bhōgaṅgaḷu
anubhavisi tīrida mēle nāśavāguvavu.
Śivabhaktana mukhavemba hōma kuṇḍadalli māḍidantha
annōdaka modalāda havis'su endendu keḍadu’
endu īśvaranu nirūpisiruvanayya
śāntavīrēśvarā