Index   ವಚನ - 351    Search  
 
ಈ ಪ್ರಕಾರವಾದ ಜಪ ವಿಧಾನವೆ ಜ್ಞಾನವೆಂಬ ಸ್ರೀಯ ಅಧರಪಾನವು. ದೃಢವಹಂಥ ನಿಷ್ಠೆಯೆ ಆಲಿಂಗನವು. ಜಪ ಸಂಖ್ಯೆಗಳಿಗೆ ಸಂಬಂಧಿಸಿದುದೆ ನಖಕ್ಷತವು. ಆಮಂತ್ರಣ ವಾಕ್ಯಂಗಳೆ ಪದವಿಡಿವ ಸಂಭ್ರಮವು ಇಂತು ಸುರತ ಕ್ರಿಯೆಗೆ ಉಚಿತವಹ ಪದ್ಮಾಸನವೆ ಸುಪ್ಪತ್ತಿಗೆಯಯ್ಯ. ಶ್ರೀ ಪಂಚಾಕ್ಷರಿಯನು ಮೆಲ್ಲನೆ ಉಚ್ಚರಿಸುವ ಮನವೆ ಯೋಗ್ಯವಯ್ಯ ಶಾಂತವೀರೇಶ್ವರಾ