ಈ ಪ್ರಕಾರದಲ್ಲಿ ಉತ್ಕರ್ಷವಾದ ಪಂಚಾಕ್ಷರಿ
ಎಂಬ ಪರಾಶಕ್ತಿಯು ಎನ್ನನು
ದಿವಾರಾತ್ರಿಯಲ್ಲಿ ಕ್ರೀಡಿಸುತ್ತಿಹಳಯ್ಯ.
ಪೂರ್ವ ಶಕ್ತಿಯಾದ ಮಹಾ ಶಕ್ತಿಯೆ
ನಿನಗೆ ನಿನ್ನೊಡನೆ ಕ್ರೀಡಿಸಲು ತೆರವು ಇಲ್ಲ ನೋಡಾ.
ಎಂತೆಂದು ವಿದ್ಯೆಯಲ್ಲಿ ರಮಿಸುತ್ತಿರುವ ವೀರ ಮಾಹೇಶ್ವರನು
ಅವಿದ್ಯಯ ತಿರಸ್ಕರಿಸುತ್ತಿರ್ಪನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ī prakāradalli utkarṣavāda pan̄cākṣari
emba parāśaktiyu ennanu
divārātriyalli krīḍisuttihaḷayya.
Pūrva śaktiyāda mahā śaktiye
ninage ninnoḍane krīḍisalu teravu illa nōḍā.
Entendu vidyeyalli ramisuttiruva vīra māhēśvaranu
avidyaya tiraskarisuttirpanayya
śāntavīrēśvarā