Index   ವಚನ - 353    Search  
 
ಸದ್ಗುರುವಿನಿಂದ ತಿಳಿದಂತಹ ಜ್ಞಾನವೆ ‘ಜ್ಞಾನವು’. ‘ಪಾಶ’ ಪದಾರ್ಥವು ‘ಪಶು’ ಪದಾರ್ಥವು. ‘ಪತಿ’ ಪದಾರ್ಥವು ‘ಜ್ಞೇಯ’ವೆನಿಸುವುದು. ‘ಪಾಶ’ವೆಂದೊಡೆ ಮಲಮಾಯ ಕರ್ಮಂಗಳು. ‘ಪಶು’ವೆಂದಡೆ ಜೀವನು, ‘ಪತಿ’ ಎಂದೊಡೆ ಶಿವನು. ಶಿವಪೂಜೆ ಮೊದಲಾದುದು ‘ಅಪೆನುಷ್ಠೇಯ’ವೆನಿಸುವುದಯ್ಯ. ಭಸ್ಮ ರುದ್ರಾಕ್ಷೆ ಮುಂತಾದುದೆ ‘ಅಧಿಕಾರ’ವು ಅಹುದು ನೋಡಾ. ‘ಶಿವಮಂತ್ರ’ ಮೊದಲಾದುವು ‘ಸಾಧನ’ವೆನಿಸುವುದಯ್ಯ: ಶಿವನಿಗೆ ಸಮಾನ ಮಹಂತತನವು ‘ಸಾಧ್ಯ’ ಕಂಡಯ್ಯ. ಈ ‘ಷಟ್ಟದಾರ್ಥ ಸಂಗ್ರಹ ಜ್ಞಾನ’ವು ‘ಸರ್ವಜ್ಞತ್ವ’ವೆಂದು ಹೇಳುವರಯ್ಯ ಶಾಂತವೀರೇಶ್ವರಾ