Index   ವಚನ - 354    Search  
 
ಗುರು ಸಂಬಂಧವಾದ ವ್ರತವು ಲಿಂಗ ಸಂಬಂಧವಾದ ವ್ರತವು ಚರ ಸಂಬಂಧವಾದ ವ್ರತವು ಪ್ರಸಾದಿ ಸಂಬಂಧವಾದ ವ್ರತವು ಪಾದೋದಕ ಸಂಬಂಧವಾದ ವ್ರತವು ಭಕ್ತಿ ಸಂಬಂಧವಾದ ವ್ರತವು ಹೀಗೆಂದು ಎನ್ನಿಂದ ಹೇಳಲಾದ ಆರು ತೆರನಾದಂಥ ವೀರಮಾಹೇಶ್ವರ ವ್ರತವನ್ನು ಆಚರಿಸುವುದೆಂದು ನಿರೂಪಿತವಾಯಿತ್ತಯ್ಯ ಶಾಂತವೀರೇಶ್ವರಾ