Index   ವಚನ - 355    Search  
 
ದ್ವೇಷವಿಲ್ಲದುದು, ಸತ್ಯವ ನುಡಿವುದು, ಭವಿಭಕ್ತ ಭೇದವು, ಬಾಹ್ಯೇಂದ್ರಿಯ ನಿಗ್ರಹವು, ಸುಖ ದುಃಖಂಗಳ ಸೈರಣೆಯು, ಶಿವಭಕ್ತನುಗ್ರಹವು, ಮಾಹೇಶ್ವರರುಗಳಿಗೆ ಧನಕನಾಕದಿ ವಸ್ತು ದಾನವು, ಹೀಗೆಂಬ ಇವು ವೀರಶೈವರುಗಳ ಷಟ್ಸ್ಥಲಂಗಳಯ್ಯ ಶಾಂತವೀರೇಶ್ವರಾ