ಆರಲ್ಲಿಯು ದ್ವೇಷವಿಲ್ಲದಿಹುದು,
ಗುರು ಸೇವೆಯ ಶುಚಿತನವು,
ಲಘು ಭೋಜನವು, ಗುರುಲಿಂಗ
ಜಂಗಮರಲ್ಲಿ ಮರವೆ ಇಲ್ಲದಿಹುದು
ಇಂತೈದು ವೀರ ಮಾಹೇಶ್ವರರ
ನೇಮಂಗಳೆಂದು ಹೇಳಲಾಗಿತ್ತಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Āralliyu dvēṣavilladihudu,
guru sēveya śucitanavu,
laghu bhōjanavu, guruliṅga
jaṅgamaralli marave illadihudu
intaidu vīra māhēśvarara
nēmaṅgaḷendu hēḷalāgittayya śāntavīrēśvarā