Index   ವಚನ - 359    Search  
 
ಇನ್ನು ಪರಮೇಶ್ವರನ ದಶಗುಣಗಳೆಂತೆನೆ, ಪ್ರಪಂಚ ಸಾಕ್ಷಾತ್ಕಾರ, ವಿಷಯ ವೈರಾಗ್ಯ, ಜಗತ್ಪ್ರಭುತ್ವ, ತಪಸ್ಸು, ಸತ್ಯವು, ಕ್ಷಮೆ, ಧೈರ್ಯ, ಸೃಷ್ಠಿಕಾರ್ಯ, ತನ್ನ ತಾ ತಿಳಿಯುವುದು, ಜಗದಾಧಾರಕನಾದುದು ಈ ಅವ್ಯಯಂಗಳೆಂಬ ಹತ್ತು ಗುಣಗಳಿಂದ ಪರಮೇಶ್ವರನು ಪ್ರಸಿದ್ಧನು ಅಯ್ಯ ಶಾಂತವೀರೇಶ್ವರಾ