Index   ವಚನ - 364    Search  
 
ಇನ್ನು ನಾರಾಯಣನು ಭೃಗುಮುನಿಯ ಶಾಪದಿಂದ ಆದ ದಶವಾತಾರಗಳೆಂತೆನೆ, ‘ಎಲೈ ನಾರಾಯಣನೆ ನೀನು ಮತ್ಸ್ಯ ಕೂರ್ಮ ರೂಪವುಳ್ಳವನಾಗಿ ಮಾಂಸ ನೆತ್ತರ ಕೀವನು ಭುಂಜಿಸುವಾತನಾಗಿ ವರಾಹ ರೂಪಿನಿಂದೆ ಲೋಕದ ಮನುಜರ ಮಲವನು ತಿನ್ನುವ ಹಾಂಗೆ ತಾಮಸಂಗಳಾದ ನಾನಾ ದೋಷಂಗಳ ಬಹುವಾದ ದುಃಖಗಳುಳ್ಳಾತನಾಗೆಂದು’ ಶಪಿಸಿದನಯ್ಯ ಶಾಂತವೀರೇಶ್ವರಾ