‘ದೇವತೆಗಳ’ ಸಹಸ್ರ ವರ್ಷದ ಕಡೆಯಲ್ಲಿ
ಆ ಬ್ರಹ್ಮನ ಗರ್ಭದಿಂದ ಗುದದಿಂದ ಹೊರಟವನಾಗಿ
ನಾನು ಅಧೋಕ್ಷಜನಾದೆನೆಂದು ಹೇಳಿದನಯ್ಯ
ಎಲೆ ದುರ್ಬುದ್ಧಿಯುಳ್ಳ ಗರ್ವಿಷ್ಟನಾದ ವ್ಯಾಸನೆ
ನೀನು ದೊಡ್ಡದಾದ ಕೇಡನು ನುಡಿದೆ
ಎನ್ನ ಒಡೆಯನಾದ ಶಿವನನು ಜರೆದು
ಆವುದಾನೊಂದು ಕಾರಣದಿಂದ ಎನ್ನನು ಕೊಂಡಾಡುತ್ತಿದ್ದಿ
ಎಂದು ವಿಷ್ಣುವು ನುಡಿದನಯ್ಯ
ಶಾಂತವೀರೇಶ್ವರಾ