Index   ವಚನ - 368    Search  
 
ದ್ವಾರವತಿಯಲ್ಲಿ ‘ಸೋಮೇಶ್ವರ’ನೆಂಬ ಲಿಂಗವನು, ಲಂಕೆಯಲ್ಲಿ ‘ಮತ್ಸ್ಯಕೇಶ್ವರ’ನೆಂಬ ಲಿಂಗವನು, ವೃದ್ಧಾಚಲದಲ್ಲಿ ‘ವರಾಹೇಶ್ವರ’ನೆಂಬ ಲಿಂಗವನು, ಕಪಿಲತೀರ್ಥದಲ್ಲಿ ‘ಪರಶುರಾಮೇಶ್ವರ’ನೆಂಬ ಲಿಂಗವನು, ಮಹಾಕ್ಷೇತ್ರದಲ್ಲಿ ವಾಮನಾವತಾರವನುಳ್ಳ ವಿಷ್ಣುವಿನಿಂದ ‘ಪ್ರತಿಷ್ಠತವಾದ’ ‘ವಾಮೇಶ್ವರ’ನೆಂಬ ಲಿಂಗವನು, ಆಹೋಬಲದಲ್ಲಿ ‘ನೃಸಿಂಹೇಶ್ವರ’ನೆಂಬ ಲಿಂಗವನು, ಹೇಮಂತದಲ್ಲಿ ‘ಕೃಷ್ಣೇಶ್ವರ’ನೆಂಬ ಲಿಂಗವನು, ಸೇತುಬಂಧದಲ್ಲಿ ‘ರಾಮೇಶ್ವರ’ನೆಂಬ ಲಿಂಗವನು, ನಾರಾಯಣನು ತಾನೆ ಮತ್ಸ್ಯಾದಿ ಕಲ್ಕ್ಯಾವತಾರಗಳಿಂದ ನಿವೃತ್ತಿಗೊಸ್ಕರ ಪ್ರತಿಷ್ಠೆಯ ಮಾಡಿ ಸದ್ಭಕ್ತಿಯಿಂದ ಪೂಜಿಸಿದನಯ್ಯ ಶಾಂತವೀರೇಶ್ವರಾ