Index   ವಚನ - 371    Search  
 
ಶ್ರೀ ಗುರುವಿನ ಕರಕಮಲದಲ್ಲಿ ಉದಯವಾದಾತಂಗೆ ಜಾತಿಸೂತಕ ಜನನಸೂತಕ ಪ್ರೇತಸೂತಕ ರಜಸ್ಸೂತಕ ಸೂತಕ ಉಚ್ಚಿಷ್ಟವೆಂಬ ಪಂಚಸೂತಕಂಗಳಿಲ್ಲವಯ್ಯ. ಪಂಚಭೂತಂಗಳ ಪ್ರಕೃತಿ ನಷ್ಟವಾಗಿ ಪಂಚಾಕ್ಷರಿ ಮಂತ್ರ ಸ್ವರೂಪಮಾಗಿ ವಿಧಿ ಲಿಖಿತಮಪ್ಪ ‘ಅಕವಿವಿನಿ’ ಎಂಬ ಪಂಚಾಕ್ಷರಂಗಳನು ‘ಅ’ ಕಾರವೆ ಲಿಂಗವಾಯಿತ್ತು ‘ಕ’ ಕರ್ಮತ್ರಯವಳಿದು ಪ್ರಸಾದತ್ರಯವಾಯಿತ್ತಯ್ಯ. ‘ವಿ’ತ್ತವಳಿದು ಚಿದ್ಘನವಾಯಿತ್ತು. ‘ವಿ’ಕೃತಿಯಳಿದ ಜ್ಞಾನ ವಿವೇಕವಾಯಿತ್ತು ನಿ’ಧನವೆಂಬ ಮರಣವಳಿದು ಲಿಂಗೈಕ್ಯವಾಯಿತ್ತಯ್ಯ ಶಾಂತವೀರೇಶ್ವರಾ