Index   ವಚನ - 373    Search  
 
ಪೂಜ್ಯ ಪೂಜಕನಾದ ಶಿವಲಿಂಗ ಜೀವಾತ್ಮಂಗೆ ಬೇದವಿಲ್ಲದೆ ಇರಲಾಗಿ, ಶಿವಲಿಂಗನಿಷ್ಠೆ ವಿರೋಧವಾದ ಕಾರಣ ಶಿವಲಿಂಗಪೂಜಾ ಕರ್ಮ ಮೊದಲಾದ ಕ್ರಿಯಾಸಂಪತ್ತೆ ಇಲ್ಲವಾದ ಕಾರಣ ಸರ್ವಾದ್ವೈತ ವಿಚಾರದ ವರ್ತನೆಗೆ ಜ್ಞಾನವಿಲ್ಲದ ಇರಲಾಗಿ ಶಿವಲಿಂಗ ಪೂಜಾ ಕರ್ಮವುಳ್ಳ ಮಾಹೇಶ್ವರನು ಸರ್ವಾದ್ವೈತವನು ನಿರಸನಮಂ ಮಾಡುವುದಯ್ಯ ಶಾಂತವೀರೇಶ್ವರಾ