Index   ವಚನ - 374    Search  
 
ಅಂತರಂಗದಲ್ಲಿ ನಾನೆ ಶಿವನೆಂದರಿದು ಬಹಿರಂಗದಲ್ಲಿ ಇಷ್ಟಲಿಂಗವೆ ಆ ಮಹಾ ಜ್ಞಾನ ಸುಜ್ಞಾನ ಪರಿಪೂರ್ಣಜ್ಞಾನ ಸ್ವರೂಪವೆಂದು ಅಷ್ಟಾವಿರ್ಧಾಚನೆ ಷೋಡಶೋಪಚಾರದಿ ಸತ್ಕ್ರೀಯಗಳ ಮಾಡಬೇಕಲ್ಲದೆ ಅಹಂ ಬ್ರಹ್ಮವೆಂಬದ್ವೈತವ ಮಾಡಲಾಗದಯ್ಯ. ಅಹಂಬ್ರಹ್ಮವೆಂದಹಂಕರಸಿ ಬ್ರಹ್ಮ ವಿಷ್ಣುಗಳು ಹಂದಿಹದ್ದುಗಳಾದರಯ್ಯ ಶಾಂತವೀರೇಶ್ವರಾ