Index   ವಚನ - 376    Search  
 
ಬ್ರಹ್ಮರಂಧ್ರದಲ್ಲಿ ನಾದವೆಂಬ ಹೆಸರುಳ್ಳ ಸಕಲ ಮಂತ್ರಕ್ಕೂ ಆಶ್ರಯವಾದ ಕಾಲಾಗ್ನಿ ಸದೃಶ್ಯವಾದ ಕೋಟಿ ಮಿಂಚುಗಳಿಗೆ ಸಮಾನವಾಗಿ ಪ್ರಕಾಶಿಸುತ್ತಿರ್ದ ಓಂಕಾರವೆಂಬ ಚಿತ್ಕಲೆಯೆ ಗುರುಮುಖದಿಂದ ಕರಸ್ಥಲಕ್ಕೆ ಇಷ್ಟಲಿಂಗವಾಗಿಯೆಯ್ದಿತ್ತಯ್ಯ, ಆ ಕರಸ್ಥಲದಲ್ಲಿರ್ದ ಲಿಂಗವೆ ಅಂತರಂಗಕ್ಕೆ ಪ್ರಾಣಲಿಂಗವೆನಿಸಿತ್ತಯ್ಯ ಆತ್ಮಂಗೆ ಭಾವಲಿಂಗವಾಗಿ ಬಂದಿತ್ತೆಂಬುದನರಿಯದೆ ಭೇದವನು ಮಾಡಿ ನುಡಿವ ದ್ವೈತಾದ್ವೈತ ಹಠಯೋಗಿಗಳಿಗೆ ನರಕವೆ ಪ್ರಾಪ್ತಿಯಯ್ಯ ಶಾಂತವೀರೇಶ್ವರಾ