Index   ವಚನ - 377    Search  
 
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಕೆಡದೆ ಕ್ಷುತ್ತು ಪಿಪಾಸೆ ಶೋಕ ಮೋಹ, ಜರಾ ಮರಣಂಗಳೆಂಬ ಷಡೂರ್ಮೆಗಳು ನಷ್ಟವಾಗದೆ ಛೇದನ ಚಾಲನ ದಾಹನಂಗಳಿಂದೆ ನಾಲಗೆಯನು ಲಂಬಿಕಾಯೋಗದಿಂದ ಬ್ರಹ್ಮರಂಧ್ರಕ್ಕೆ ನೀಡಿ ಶ್ಲೇಷಾಮೃತವನು ಭುಂಜಿಸಿ ಬ್ರಹ್ಮತ್ವ ಪಡೆದೆವೆಂದು ನುಡಿದು ಸ್ವಸ್ಥ ಪದ್ಮಾಸನದಲ್ಲಿ ಕುಳಿತು ಮನದ್ವಾರವನು ಬಂಧಿಸಿ ಮನಪವನಾಗ್ನಿಗಳನು ಮುಪ್ಪರಿಗೂಡಿ ಏಕ ವಿಂಶತಿ ಗ್ರಂಥಿಯನುಳ್ಳ ಕಸಿರ ನಾಳದಲ್ಲಿ ಏರಿಸಿ ಹಟಯೋಗಾಭ್ಯಾಸದಿಂದೆ ಬ್ರಹ್ಮವು ಘಟಿಸದೆ ಮೃತವಾದರಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ವಾಗದ್ವೈತ ನಿರಸನವಂ ಮಾಡಿ ಸರ್ವಾಂಗದಲ್ಲಿಯೂ ಲಿಂಗ ಪರಿಪೂರ್ಣವೆಂಬರಿಕೆಯುಳ್ಳ ಮಾಹೇಶ್ವರನು ಒಂದು ವೇಳೆ ಆಹ್ವಾನಿಸಿ ಎಂದು ವೇಳೆ ವಿಸರ್ಜಿಸುವುದಕ್ಕೆ ಅವಕಾಶವನರಿಯದಿರ್ದವನಾಗಿ ಆಹ್ವಾನ ವಿಸರ್ಜನಗಳೆಂಬೆರಡನು ತಿರಸ್ಕರಿಸುತ್ತಿರಲಾಗಿ ಮುಂದೆ ‘ಅಹ್ವಾನ ವಿಸರ್ಜನ ನಿರಸನ ಸ್ಥಲ’ವಾದುದು.