Index   ವಚನ - 379    Search  
 
ಶ್ರೀ ಗುರುನಾಥನು ಶಿವಕಲೆಯೊಡನೆ ಕೂಡಿರ್ದ ಶಿವಲಿಂಗದಲ್ಲಿ ಕೊಟ್ಟಂದಿನಿಂದ ಆ ಶಿವಲಿಂಗದಲ್ಲಿ ಶಿವನು ಇರುತ್ತಿರುವನಯ್ಯ. ಅದು ಕಾರಣ ಈ ಶಿವಲಿಂಗದಲ್ಲಿ ಆಹ್ವಾನಿಸಲಾಗದು. ಅದೆಂತೆಂದೊಡೆ, ಶರಣಭರಿತ ಶಿವನೆಂಬುದಕ್ಕೆ ವಿರುದ್ಧಮಪ್ಪುದಾಗಿ ಆಕಾರ ನಿರಾಕಾರವೊಂದೆಯಯ್ಯ ಶಾಂತವೀರೇಶ್ವರಾ