ತೋಡಿದ ಬಾವಿ, ಬಳಸುವ ಭಾಜನಕ್ಕೆ ಮರೆಯಲ್ಲದೆ,
ಹರಿದಾಡುವ ಚಿತ್ತಕ್ಕೆ, ಸರ್ವವ ಕೂಡುವ ಪ್ರಕೃತಿಗೆ,
ಗೆಲ್ಲ ಸೋಲಕ್ಕೆ, ಅಲ್ಲ ಅಹುದೆಂಬುದಕ್ಕೆ
ಎಲ್ಲಿಯೂ ಮರೆಯ ಕಾಣೆ.
ಬಹುಮಾತನಾಡುವ ಬಾಯಿ ಸರ್ವರ ಕೂಡಿ
ಬೆರೆದೆನೆಂಬಂಗಕ್ಕೆ ಮರೆಯ ಕಾಣೆ.
ಕಳ್ಳನ ಜಾಳಿಗೆಯಂತೆ ಒಳ್ಳೆಯ ಮುದ್ರೆಯನಿಕ್ಕಿದಡೆ
ಸುರಿದಲ್ಲಿಯೆ ಕಾಣಬಂದಿತ್ತು.
ಕಲ್ಲಿಯ ಬಳಸಿನ ನೂಲಿನಂತೆ
ಚಲ್ಲಿ ಸಿಕ್ಕಿನಲ್ಲಿ ತುಯಿದಡೆ
ಆ ಕಳ್ಳರ ಬಲ್ಲವರಿಗೆ ಎಲ್ಲಿಯ ವ್ರತ?
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು
ಅವರುವ ಬಲ್ಲನಾಗಿ ಒಲ್ಲನು.
Art
Manuscript
Music
Courtesy:
Transliteration
Tōḍida bāvi, baḷasuva bhājanakke mareyallade,
haridāḍuva cittakke, sarvava kūḍuva prakr̥tige,
gella sōlakke, alla ahudembudakke
elliyū mareya kāṇe.
Bahumātanāḍuva bāyi sarvara kūḍi
beredenembaṅgakke mareya kāṇe.
Kaḷḷana jāḷigeyante oḷḷeya mudreyanikkidaḍe
suridalliye kāṇabandittu.
Kalliya baḷasina nūlinante
calli sikkinalli tuyidaḍe
ā kaḷḷara ballavarige elliya vrata?
Ācārave prāṇavāda rāmēśvaraliṅgavu
avaruva ballanāgi ollanu.