Index   ವಚನ - 389    Search  
 
ಸರ್ವಗತ ಶಿವನಾದೊಡೆ ಸರ್ವಕ್ಕೆ ಜನನ ಮರಣ ಪೂಣ್ಯ ಪಾಪ ಸುಖ ದುಃಖಗಳುಂಟೆ? ಸಕಲ ಪ್ರಾಣಿಗಳಲ್ಲಿಯೂ ಶಿವನಿರ್ದೊಡೆ ಹುಲಿ ಹುಲ್ಲೆಯನ್ನು ಮಾರ್ಜಾಲ ಮೂಷಕವನ್ನು ಗರುಡ ಸರ್ಪವನ್ನು ನಾಯಿ ಮೊಲವನ್ನು ಕೊಲಲಾಗದಯ್ಯ. ಕೊಂದೊಡೆ ಶಿವದ್ರೋಹಮಪ್ಪುದು. ಅದು ಕಾರಣ ಸರ್ವಗತ ಶಿವನಲ್ಲವಯ್ಯ. ಬಿತ್ತಿದ ಬೆಳೆಯಲ್ಲಿ ಆ ಬೀಜ ಸ್ಥಾಪಕನವರ ಹಾಗೆ ವೃದ್ಧಿಗೊಳಗಾಗಿದ್ದಾನೆ. ಆಶ್ವ ಗಜಾವಳಿ ಮೃಗಾವಳಿ, ತರು ಲತಾವಳಿ ಸ್ವರ್ಗ ಮರ್ತ್ಯ ಪಾತಾಳಾವಳಿಗಳು ಮೊದಲಾದ ಲೇಖವನ ಮಾಡಿದ ಭಾವಚಿತ್ರಿಕನು ವರ ಕೊರತೆ ನೆರತೆಗಳಿಗೊಳಗಲ್ಲವಯ್ಯ. ಕಬ್ಬನವ ಕಮ್ಮಾರ ಮಾಡುವನೆಂದರೆ ಆ ಕಬ್ಬುನ ತಾ ಕಮ್ಮಾರನಪ್ಪನೆ? ಕುಂಭವ ಕುಂಭಕಾರ ಮಾಡುವನೆಂದರೆ ಕುಂಭವೇನು ಕುಂಭಕಾರನೆ? ಅಲ್ಲವಯ್ಯ, ಆ ಹಾಂಗೆ ಸಚರಾಚರವನು ಸೃಜಿಸಿದ ಶಿವನಾ ಜಗತ್ತಿನ ಸುಖ ದುಃಖಕ್ಕೆ ಒಳಗಲ್ಲವಯ್ಯ ಶಾಂತವೀರೇಶ್