ಗುರುವಿನ ಜಿಹ್ವೆ ಮುಟ್ಟಿ ಬಂದುದೆ ಪ್ರಸಾದ;
ತನ್ನ ಬಾಯಿ ಮುಟ್ಟಿದಲ್ಲಿ ಎಂಜಲೆಂಬರು.
ಲಿಂಗ ಮುಟ್ಟಿ ಬಂದುದೆ ಪ್ರಸಾದ;
ತನ್ನ ಬಾಯಿ ಮುಟ್ಟಿದಲ್ಲಿ ಎಂಜಲೆಂಬರು.
ಜಂಗಮದ ಜಿಹ್ವೆ ಮುಟ್ಟಿ ಬಂದುದೆ ಪ್ರಸಾದ;
ತನ್ನ ಬಾಯಿ ಮುಟ್ಟಿದಲ್ಲಿ ಎಂಜಲೆಂಬರು.
ಗುರುವಿದ್ದಲ್ಲಿ ಅಪವಿತ್ರವುಂಟೆ?
ಲಿಂಗವಿದ್ದಲ್ಲಿ ಶ್ರೇಷ್ಠ ಕನಿಷ್ಠ ಸ್ಥಲ ಉಂಟೆ?
ಜಂಗಮವಿದ್ದಲ್ಲಿ ಜಾತಿ ಭೇದ ಉಂಟೆ? ಇಲ್ಲವಯ್ಯ
ಶಾಂತವೀರೇಶ್ವರಾ