Index   ವಚನ - 427    Search  
 
ಆ ಗುರು ಸ್ವಾಮಿಯ ಪಾದಂಗುಷ್ಠಾಗ್ರದಲ್ಲಿ ಗಂಗೆ ಮೊದಲಾದರವತ್ತೆಂಟು ತೀರ್ಥಂಗಳು ಇರುವವು. ಆಶ್ವಿನಿ ಆದಿ ನಕ್ಷತ್ರಂಗಳು ಆದಿತ್ಯಾದಿ ಗ್ರಹ ಸಮೂಹಂಗಳು ಆ ಶ್ರೀಗುರುವಿನ ಹರಡುಗಳಲ್ಲಿ ಇರುವವು. ಅರೆಪಾದದಲ್ಲಿ ಸಪ್ತ ಸಮುದ್ರಂಗಳಿರುವವು. ಮೇಲಣ ಪಾದದಲ್ಲಿ ಸಪ್ತಕುಲಪರ್ವತಂಗಳಿಹವಯ್ಯ ಶಾಂತವೀರೇಶ್ವರಾ