Index   ವಚನ - 429    Search  
 
ಅಜ್ಞಾನದ ಕತ್ತಲೆಯಿಂದ ಕಾಣದಿರ್ದ ಕಣ್ಣನು ಜ್ಞಾನಾಂಜನವೆಂಬ ಶಲಾಕೆಯಿಂದ ತೆರೆಯಲು ಪ್ರಕಾಶಿಸುವಂತಾಯಿತು. ಆ ಶ್ರೀಗುರುವಿಗೆ ನಮಸ್ಕಾರವಯ್ಯ. ಗುರುವೆಂಬೆರಡಕ್ಷರದ ಭೇದವೆಂತೆನೆ, ‘ಗು’ಕಾರವೆ ತೈಲಯುಕ್ತವಾದ ಬತ್ತಿಯು ‘ರು’ಕಾರವೆ ಅಗ್ನಿಯು; ಆ ಎರಡರ ಕೂಟದ ಸಾಮರ್ಥ್ಯದಿಂದ ಸದ್ಗುರುವು ಸ್ವಯಂ ಜ್ಯೋತಿಯಯ್ಯ ಶಾಂತವೀರೇಶ್ವರಾ ಸೂತ್ರ : ಈ ಪ್ರಕಾರದಿಂದ ಸರ್ವಾಂಗದಲ್ಲಿಯೂ ಲಿಂಗಮಹಾತ್ಮೆಯನು ಸ್ಥಿರೀಕರಿಸಿದ ಪ್ರಸಾದಿಯ ಮನಸ್ಸಿನಲ್ಲಿ, ಸ್ಥಿರೀಕರಿಸಿದ ಲಿಂಗಮಹಾತ್ಮೆಯ ಎಂತಿದ್ದಿತೆಂದೊಡೆ ಮುಂದೆ ‘ಲಿಂಗಮಹಾತ್ಮೆಯಸ್ಥಲ’ವಾದುದು.