Index   ವಚನ - 430    Search  
 
ಸ್ಥಾವರ ಜಂಗಮಾತ್ಮಕವಾದ ಈ ಸಕಲ ಜಗತ್ತು ಎಲ್ಲಿ ಅಡಗುತ್ತಹುದು ಮತ್ತೆಲ್ಲಿ ಹುಟ್ಟುತ್ತಿಹುದು; ಅದನೆ ಲಿಂಗವೆಂದು ಲಿಂಗತತ್ವ್ತ ಪರಾಯಣರು ನಿರೂಪಿಸುವರಯ್ಯ! ಸಕಲ ದೇಹಿಗಳಿಗೆ ಲಯ ಗಮನ ಹೇತುವಾಗಿ ಇರುವುದರಿಂದ ಸಕಳ ನಿಃಕಳ ರೂಪವಹ ಸಾಕ್ಷಾತ ಶಿವ ತಾನೆ ‘ಲಿಂಗ’ವೆನಿಸಿಕೊಂಬನಯ್ಯ ಶಾಂತವೀರೇಶ್ವರಾ