Index   ವಚನ - 431    Search  
 
ಈ ಪರಮೇಶ್ವರನ ಮುಖದಲ್ಲಿ ಬ್ರಾಹ್ಮಣ ಹುಟ್ಟಿದನು. ತೋಳಿನಲ್ಲಿ ಕ್ಷತ್ರಿಯನು ಹುಟ್ಟಿದನು. ತೊಡೆಯಲ್ಲಿ ಕೋಮಟಿಗೆ ಹುಟ್ಟಿದನು, ಪಾದಗಳಿಂದ ಒಕ್ಕಲಿಗ. ಮನದಲ್ಲಿ ಚಂದ್ರ, ನೇತ್ರದಲ್ಲಿ ಸೂರ್ಯ, ಮುಖದಲ್ಲಿ ಅಗ್ನಿ, ಪ್ರಾಣದಲ್ಲಿ ವಾಯು, ಹೊಕ್ಕುಳಲ್ಲಿ ಆಕಾಶ, ಪಾದಂಗಳಲ್ಲಿ ಭೂಮಿ, ಶ್ರೋತ್ರಂಗಳಲ್ಲಿ ದಿಕ್ಕುಗಳು ಹುಟ್ಟಿದವು. ಮಸ್ತಕಂಗಳಲ್ಲಿ ತೆತ್ತೀಸ ಕೊಟಿ ದೇವತೆಗಳು ಹುಟ್ಟಿದರು. ಪರಮೇಶ್ವರನ ವಿಲಾಸದಿಂದ ತನ್ನ ಸರ್ವಾಂಗದಲ್ಲಿ ಸಮಸ್ತ ಲೋಕಂಗಳನು ಹುಟ್ಟಿಸಿದನಯ್ಯ ಶಾಂತವೀರೇಶ್ವರಾ