ಭವ ದುಃಖವನು ಓಡಿಸುವಂಥ ಎಲೆ ಪರಮೇಶ್ವರನೆ,
ಜನ್ಮಂಗಳ ದುಃಖದಿಂದೆ ಭಯ ಪಡುವ ಎನ್ನನು
ನಿನ್ನ ಬಲಗಡೆಯ ಮುಖದಿಂದ ರಕ್ಷಿಸಿ ಮುಕ್ತನನ್ನಾಗಿ ಮಾಡು.
ಈ ಶ್ರುತಿ ತಾತ್ಪರ್ಯವೆಂದರೆ, ಬ್ರಹ್ಮ ವಿಷ್ಣು ಮೊದಲಾದ ದೇವತೆಗಳು
ಜನ್ಮಂಗಳ ದುಃಖಂಗಳನು ಪರಿಹರಿಸಲು ಸಮರ್ಥರಲ್ಲ.
ಅದಕ್ಕೆ ಶಿವನೊಬ್ಬನೆ ಸಮರ್ಥನಾದ ಕಾರಣ,
ಎಲೆ ಪರಮೇಶ್ವರನೆ,
ನನ್ನ ಭವದುಃಖಗಳನು ಸಂಹರಿಸುವುದಕ್ಕೆ ಅಭಿಮುಖನಾಗೆಂದು
ವೇದಪುರುಷನು ಲಿಂಗಮೂರ್ತಿಯಾದ ಶಿವನನು
ಬೇಡಿಕೊಳ್ಳುತ್ತಿಹನೆಂಬುದು ತಾತ್ಪರ್ಯವಯ್ಯ
ಶಾಂತವೀರೇಶ್ವರಾ