Index   ವಚನ - 459    Search  
 
ಆ ಶಿವಶೇಷವನು ದೇವತೆಗಳು ಮೊದಲಾದವರು ಅನುಭವಿಸಲಿಚ್ಚೆ ಉಳ್ಳಂಥದುದಾಗಿ ವೇದಗಳು ಬಯಸುತ್ತಿರ್ದಪವಯ್ಯ. ಶಿವ ಪ್ರಸಾದವನೆ ಆವಾಗಳೂ ಅನುಭವಿಸುವವನು ಚಂಡಾಲನಾದೊಡೆಯು ಚಂಡಾಲನಲ್ಲ. ಪುಲ್ಕಸನಾದೊಡೆಯು ಪುಲ್ಕಸನಲ್ಲ ಎಂದು ವೇದ ಪೇಳುತ್ತಿಹುದಯ್ಯ ಶಾಂತವೀರೇಶ್ವರಾ