Index   ವಚನ - 464    Search  
 
ಮತ್ತಮಾ ಪ್ರಸಾದ ಚತುರ್ವಿಧವನೆ ವಿವರುಸುತ್ತಿರ್ಪನೆಂತನೆ, ಗ್ರಾಮವು ಕ್ಷೇತ್ರಂಗಳು ಮೊದಲಾದವು. ದಾಸಿಯರು ಬಂಟರು ಎಂಬ ನಾಲ್ಕು ದೇವತ್ವವೆನಿಸಿಕೊಂಬವು. ಬಂಗಾರ ಬೆಳ್ಳಿಯು ರತ್ನ ಮೊದಲಾದವು ‘ದೇವ ದ್ರವ್ಯ’ವೆಂದು ಹೇಳುವರು. ಆವುದಾನೊಂದು ಪತ್ರೆಯು ಪುಷ್ಪವು ಹಣ್ಣು ಉದಕವು ಅನ್ನಪಾನಾದಿಗಳು ದೇವಂಗೋಸ್ಕರ ಅರೋಪಿಸಿದ ಆ ಸಮಸ್ತ ನೈವೇದ್ಯವೆಂದು ಹೇಳುವರಯ್ಯ ಶಾಂತವೀರೇಶ್ವರಾ