Index   ವಚನ - 467    Search  
 
ಆ ಪರಮೇಶ್ವರನಿಗೆ ಅರ್ಪಿತವಾದ ಪತ್ರೆ ಪುಷ್ಪ ಗಂಧ ಅನ್ನ ಪಾನಾದಿ ಎಂಬ ಈ ತ್ರಿವಿಧ ಪ್ರಸಾದವು ಬ್ರಾಹ್ಮಣಾದಿಗಳು ಸೇವಿಸಲು ಯೋಗ್ಯ. ಆ ಪರಶಿವನಿಗೆ ಅರ್ಪಿತವಾದ ಗ್ರಾಮ ಭೂಮಿ ಹೇಮ ರೌಪ್ಯ ರತ್ನ ದಾಸಿದಾಸರೆಂಬವರೆಲ್ಲ ಭೂಮಿಯಲ್ಲಿ ಒಂದಂಗುಲದಷ್ಟನು ತೆಗೆದುಕೊಳ್ಳಲಾಗದು. ಕಿಂಚಿತ್ ದ್ರವ್ಯವನಪಹರಿಸಿದರೆ ರೌರವವೆಂಬ ನರಕವನೆಯ್ದುವರಯ್ಯ ಶಾಂತವೀರೇಶ್ವರಾ