ಅಂಗ ಲಿಂಗದ ಹಾನಿ ವೃದ್ಧಿಗಳಿಲ್ಲದ
ಸಮರಸವಾದ ಶಿವಯೋಗವನು ಪ್ರತಿಪಾದಿಸುವ
ಶಿವ ಪ್ರಸಾದವು ಸಾಧ್ಯವಾಗುತ್ತಿರಲಾಗಿ
ಸಮಸ್ತ ಜಗತ್ತು ಶಿವನೊಡನೆ ಏಕಾತ್ಮವಾಗಿ ಒಪ್ಪುತ್ತಿಹುದು.
ಇದು ಕಾರಣವಾಗಿ
ಶಿವಸ್ವರೂಪಿನಿಂದ ಭಾವಿಸಲ್ಪಟ್ಟ ಸ್ವರೂಪವನುಳ್ಳ
ಅಯಾ ಪ್ರಸಾದಿಯ ತನ್ನ ಕರ್ಮ ನಾಶದಿಂದ ಬಿಡುಗಡೆ ಹೊಂದಿದ
ಪ್ರಾಣಲಿಂಗಿ ಎಂದು ಹೇಳುವರಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಪ್ರಸಾದಿಸ್ಥಲವನು ಆಚರಿಸಿ ಪ್ರಸನ್ನ ಪ್ರಸಾದದಲ್ಲಿ ಸಮರಸವಾದ ಪ್ರಸಾದಿಯು ಅನುಭವ ಮುಖದಿಂದ ಪ್ರಾಣಲಿಂಗದಲ್ಲಿ ಬೇರೆಸುವ ಭೇದವು ಎಂತೆಂದೊಡೆ ಮುಂದೆ ‘ಪ್ರಾಣಲಿಂಗಿಸ್ಥಲ’ವಾದುದು.