Index   ವಚನ - 488    Search  
 
ಗುರೂಪದೇಶದಿಂದ ಪ್ರಾಣಾಪಾನ ಸಂಘಟ್ಟನವಾಗಿ ಅವುದಾನೊಂದು ಜ್ಯೋತಿಯು ನಾಭಿಕಮಲದ ಮಧ್ಯದಿಂದ ಹುಟ್ಟಿದೆ. ಆ ಜ್ಯೋತಿಯು ಪ್ರಾಣಲಿಂಗವೆಂದು ಪ್ರಾಣಾಪಾನ ನಿರೋಧವುಳ್ಳದೆಂದು ಶಿವಯೋಗಿಗಳು ಹೇಳುವರಯ್ಯ ಶಾಂತವೀರೇಶ್ವರಾ