Index   ವಚನ - 490    Search  
 
ಜ್ಯೋತಿರ್ಮಯವಾಗಿ ಹೃತ್ಕಮಲ ಮಧ್ಯದಲ್ಲಿರುವ ಶಿವಸ್ವರೂಪವಾದ ಸರ್ವೋತ್ಕರ್ಷವಾದ ಪ್ರಾಣ ಲಿಂಗವನು ಬಿಟ್ಟು ಬಾಹ್ಯಲಿಂಗದಲ್ಲಿ ತತ್ಪರರಾದವರು ವಿಶೇಷವಾದ ಮೂಢರೆನಿಸಿಕೊಂಬರು. ಆವನಾನೊಬ್ಬನು ಬಾಹ್ಯ ಲಿಂಗ ಪೂಜಾದಿಗಳಲ್ಲಿ ಅಡ್ಡಲಾದ ಮುಖವುಳ್ಳಾತನಾಗಿ ಎಲ್ಲ ಕಾಲದಲ್ಲಿಯೂ ಆಭ್ಯಂತರದಲ್ಲಿ ಚಿದ್ರೂಪವಾದ ಪ್ರಾಣಲಿಂಗ ವಿಚಾರ ಉಳ್ಳವನಾಗಿರುವನು ಆ ಶಿವಯೋಗೀಶ್ವರನು ಪ್ರಾಣಲಿಂಗಿ ಎಂದು ಹೇಳುವರಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಪ್ರಾಣಲಿಂಗ ಸಂಬಂಧದಲ್ಲಿ ಸಮರಸವೆನೆಯ್ದಿದ ಪ್ರಾಣಲಿಂಗಿಯ ಪ್ರಾಣಲಿಂಗ ಪೂಜಾಕ್ರಮವು ಹೇಂಗೆಂತೆನೆ ಮುಂದೆ ‘ಪ್ರಾಣಲಿಂಗಾರ್ಚನೆಯಸ್ಥಲ’ವಾದುದು.