Index   ವಚನ - 497    Search  
 
ಗರ್ದುಗೆ ಅಹ್ವಾನ ಅರ್ಘ್ಯ ಪಾದ್ಯ ಆಚಮನ ಯಜ್ಞೋಪವೀತ ಪುಷ್ಪಮಾಲೆ ಅನುಲೇಪನ ಅಭರಣಂಗಳು ಸತ್ತಿಗೆ ಚಾಮರ ಬೀಸಣಿಗೆ ಆಲವಟ್ಟ ದರ್ಪಣ ಘಂಟೆ ಶಂಖ ಗೀತ ವಾದ್ಯ ನರ್ತನ ಪ್ರದಕ್ಷಿಣ ನಮಸ್ಕಾರ ಸ್ತುತಿ ಬೇಡಿಕೊಳ್ಳುವುದು ಬಿನ್ನಹ ಸಜ್ಜೆಯರಮನೆಗೆ ಬಿಜಯಂಗೈಸುವುದು ಹೀಂಗೆ ಉಪಚಾರಂಗಳು ಇಪ್ಪತ್ತನಾಲ್ಕು ಪ್ರಕಾರಗಳೆಂದು ಹೇಳುವರಯ್ಯ ಶಾಂತವೀರೇಶ್ವರಾ