Index   ವಚನ - 523    Search  
 
ಆ ಮರಣವಾದಾತನ ಶರೀರವನು ಚರ ಪಾದೋದಕದಿಂ ಪ್ರಕ್ಷಾಲಿಸಿ, ವಿಭೂತಿ ರುದ್ರಾಕ್ಷೆ ಧಾರಣಗೆಯ್ವದು. ಪ್ರಾಣ ಹೋಗುವಾಗ ಶಿವಮಂತ್ರವ ಕಿವಿಗಳಲ್ಲಿ ಜಪಿಸುತ್ತಿಹುದು ಬುದ್ಧಿವಂತರು ದುಃಖ ಮಾಡರು ಶಿವಸ್ತೋತ್ರಂಗಳನೆ ಮಾಡುವುದಯ್ಯ ಶಾಂತವೀರೇಶ್ವರಾ