Index   ವಚನ - 524    Search  
 
ಭೂಮಿಯಲ್ಲಿ ಪ್ರತಿಷ್ಠದ ಲಿಂಗವನು ಮರಳಿ ಹೇಂಗೆ ತೆಗೆಯಲಾಗದು ಹಾಂಗೆಯೆ ಶರೀರದಲ್ಲಿ ಶ್ರೀಗುರುದೇವನು ದೀಕ್ಷಾತ್ರಯದಿಂದ ಪ್ರತಿಷ್ಠಿಸಿದ ಲಿಂಗವನು ಪ್ರಾಣ ಹೋಗುವ ಕಾಲದಲ್ಲಿ ಮರಳಿ ಶರೀರದಿಂದ ಕಡೆಗೆ ತೆಗೆಯಬಾರದಯ್ಯ ಶಾಂತವೀರೇಶ್ವರಾ