Index   ವಚನ - 539    Search  
 
ಲಿಂಗವೆಂಬುದು ಪರಶಕ್ತಿಯು, ಲಿಂಗವೆಂಬುದು ಪರಶಿವನ ನಿಜದೇಹ. ಲಿಂಗವೆಂಬುದು ಪರಶಿವನ ಘನತೇಜ. ಲಿಂಗವೆಂಬುದು ಪರಶಿವನ ನಿರತಶಯಾನಂದ ಸುಖ. ಲಿಂಗವೆಂಬುದು ಪರಶಿವನ ಪರಮ ಜ್ಞಾನ. ಲಿಂಗವೆಂಬುದು ಪರಶಿವನ ಷಡಧ್ವಮಯ ಜಗಜನ್ಮಭೂಮಿ. ಲಿಂಗವೆಂಬುದು ಅಖಂಡಿತ ವೇದ ಪಂಚಸಂಜ್ಞೆ ತಾನೆಯಯ್ಯ. ಲಿಂಗವೆಂಬುದು ಹರಿಬ್ರಹ್ಮರ ನಡವೆ ಪ್ರತ್ಯಕ್ಷವಾದ ಪರಶಿವನ ಜ್ಯೋತಿ ಲಿಂಗವಯ್ಯ ಶಾಂತವೀರೇಶ್ವರಾ