Index   ವಚನ - 540    Search  
 
ಸಾಕಾರ ನಿರಾಕಾರವೆಂದರಿಯಬಾರದು. ಆದಿ ಮಧ್ಯಮಸಾನ ಶೂನ್ಯವಯ್ಯ. ತೋರಬಾರದ ಘನವ ಹೇಳಲೆಂದು, ಹೇಳಬಾರದ ಘನವ ತೋರಲೆಂದು ಜನನ ಮರಣ ವಿಜಯನು [ನೋಡಾ] ಸುಳುಹಿನೊಳಗಣ ಸೂಕ್ಷ್ಮದ ತಿಳಿವು ನೋಡಾ! ಅಣಿಮಾದಿ ಗುಣರಹಿತನು ಕಲ್ಪಿತನಯ್ಯ ಶಾಂತವೀರೇಶ್ವರಾ