Index   ವಚನ - 541    Search  
 
ವೇದಾರ್ಥವನು ಬಲ್ಲಂಥ ಮತ್ತೆ ಕೆಲಂಬರು ಮುನೀಶ್ವರರು ಶಿವಲಿಂಗವನು ಶಿವಲಾಂಛನವಾಗಿ ಹೇಳುವರು. ಅದು ಕಾರಣ ಶಿವ ತಾನೆ ಬೆಳಗಿನೊಳಗಣ ಬೆಳಗು ಲಿಂಗನಿಜವಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಲಿಂಗನಿಜ ಜ್ಞಾನವುಳ್ಳ ಪ್ರಾಣಲಿಂಗಿಯ ಸಕಲಾವಯವಂಗಳಲಿ ಲಿಂಗಸ್ವರೂಪದ ಮಾರ್ಗವು ಹೇಂಗಿತ್ತೆಂದರೆ ಮುಂದೆ ‘ಅಂಗಲಿಂಗಸ್ಥಲ’ವಾದುದು.