Index   ವಚನ - 543    Search  
 
ಅಂಗಮೆನಲು ಚಂದ್ರೋಪಮಾನಮಾದ ದೇಹಮದಕ್ಕೆ ದೃಷ್ಟಾಂತ: ಚಂದ್ರಂಗೆ ಕೃಷ್ಣ ಪಕ್ಷದೊಳ್ಕಲೆಗಳು ಕ್ಷಯವಾಗುವವು. ಶುಕ್ಲಪಕ್ಷದೊಳು ಕಲೆಗಳು ಸಂಪೂರ್ಣವಾಗುತ್ತಿಹವು. ಆ ಚಂದ್ರನೊಲು, ದೇಹವು ಆಧಿವ್ಯಾಧಿಗಳಿಂದೆ ನಷ್ಟವಾಗುವದು. ಅವು ಪರಿಹಾರವಾದ ನಂತರ ವೃದ್ಧಿಯಾಗುವುದು. ಅದರಿಂದ ಚಂದ್ರನೆಂಬ ಸಂಜ್ಞೆಯಾಯಿತ್ತು. ಅಂಥ ಬಾಲೇಂದಪುರವೆಂಬ ವಿಧಾನ ಉಳ್ಳ ಶರೀರದಲ್ಲಿ ನೆಲೆಗೊಂಡಿರುವ ಆತ್ಮನ ಜನ್ಮ ಜರಾ ಮರಣ ಶೋಕ ಮೋಹವೆಂಬ ಅನಿಷ್ಠ ಪಂಚಕಂಗಳನು ಪರಿಹರಿಸುವ ಇಷ್ಟಬ್ರಹ್ಮಸ್ವರೂಪವಾದ ಸದ್ಗುರುಮೂರ್ತಿ ಎಂಬ ಅಭಿಧಾನವುಳ್ಳ ಶಾಂತವೀರೇಶ್ವರಾ