Index   ವಚನ - 544    Search  
 
ದುರ್ಗತ್ರಯ ಧಾಮತ್ರಯ ಗುಣತ್ರಯದೊಳ್ ವರ್ಣತ್ರಯ ರತ್ನತ್ರಯ ಸ್ವರೂಪಮಾಗಿ, ಷಟ್ಪುರ ಷಟ್ವಾಂಗ ಷಡ್ಧಾತು ಷಡ್ ವ್ಯಸನಂಗಳೊಳ್ ಷಡ್ವರ್ಗ ಷಟ್ ಸೂರ್ಯರೊಳು ಷಟ್ಸಾದಾಖ್ಯ ಸ್ವರೂಪವಾಗಿ ನವಬ್ರಹ್ಮ ಪುರದೊಳ್ನವರತ್ನ ಸ್ವರೂಪದಿಂದೆ ನೀನೆ ಎನ್ನ ಸರ್ವಾಣಗದಲ್ಲಿ ಪರಿಪೂರ್ಣನಯ್ಯ ಶಾಂತವೀರೇಶ್ವರಾ